Friday, April 29, 2011

ಪ್ರೀತಿ vs ತ್ಯಾಗ


ಅವನಿಗಾಗಿ ಕಾಯುವುದರಲ್ಲಿ
ಅವನನ್ನು ಕಾಯಿಸುವುದರಲ್ಲಿ ಸುಖವಿದೆ
ಇಂದು ನಾಳೆ ಎನ್ನದೆ, ಬರುವನೆಂದು ಕಾಯುವೆ
ಆದರೆ ರಾಮನಿಗಾಗಿ ಕಾದ ಸೀತೆಯಂತೆ
ವರ್ಷನು ಗಟ್ಟಲೆ ಅವನಿಗಾಗಿ ಕಾಯಲಾರೆ...

ಸೀತೆಯಂತೆ ಅಷ್ಟೊಂದು ದಿನ
ಕಾದು ಪರಿತಪಿಸದೆ
ವತ್ತಾಯ ಪೂರ್ವಕವಾಗಿ
ಅವನ ಆಗಮನವ ನೀರಿಕ್ಷಿಸುವೆ

ತ್ಯಾಗವೇ ಪ್ರೀತಿಯಾದರೆ
ಪ್ರೀತಿಯಾಕೆ ಬೇಕು??
ಎಲ್ಲರು ತ್ಯಾಗಿಗಳಾದರೆ
ಪ್ರೀತಿಸುವರಾರು ????

ಪ್ರೀತಿಯನ್ನು ತ್ಯಾಗಮಾಡಿ
ದೊಡ್ದವರೆನಿಸಿ ಕೊಳ್ಳುವುದಕಿಂತ
ಪ್ರೀತಿಯಲಿ ಸ್ವಾರ್ತಿಯಾಗಿ
ಪ್ರೀತಿಯನು ಜಯಿಸಿ ಕೊಳ್ಳುವುದು ಉತ್ತಮ.....

4 comments:

  1. ಅದ್ಭುತ ಮಾತು......ನಂಗೆ ರಾಶಿ ಇಷ್ಟ ಆತು

    ReplyDelete
  2. bhaari aathappaa !!!! ಚೆನ್ನಾಗಿದೆ.. ನಿನ್ನ ಅಂತರಾಳದ ಮಾತು :)

    ReplyDelete