Friday, April 29, 2011

ಶ್ವಾಸ-ಆಶ್ವಾಸ


ಮನಸಿನ ಹಾದಿಯ ಸುಗಮ ದಾರಿಯ
ಅಂಚಿನ ನಲಿವಿನ ರಾಶಿಯಂತೆ
ಕದಡಿದ ಮನಕೆ ತಂಪೆರೆದ
ವರುಣನ ಕ್ರಪೆಯಂತೆ/

ವಸಂತ ಮಾಸದ ಕೋಗಿಲೆ
ಗಾನದ ಇಂಪು
ನನಸಿನ ಬಯಲಲಿ
ಕನಸಿನದೆ ಕಂಪು /






ಕಾದು ಕಾದು ಬವಣಿಸಿ ಕೊನೆಗೂ ...........

ಬಿಸಿ ಉಸಿರು ಕರಗಿ
ನಿಟ್ಟುಸಿರಿನ ಶ್ವಾಸ
ಅಲ್ಪವಿರಾಮದ ಬಯಕೆಯ ತುದಿಯ
ನಲಿವಿನ ಆಶ್ವಾಸ/

No comments:

Post a Comment