Wednesday, March 23, 2011

ಕದಡಿದ ನೆನಪು


ಹಳೆಯ ಹಾದಿಯ
ಮಾತಿಲ್ಲದ ಪಯಣ...
ಕಾಲಡಿ ಸಿಕ್ಕು ನಲುಗಿದೆ
ಮಧುರ ಯಾತನೆಗಳು....

ಇದ್ದು ಇಲ್ಲದ ನೆನಪು
ಕಾವಲಿನ ಕವಲಿಗೆ ಮುಳುವಾಗಿದೆ..
ಮನದ ಮುತ್ತಿನ ತೋರಣವ
ಹರಿದು ಛಿದ್ರ ಛಿದ್ರ ಮಾಡಿವೆ...

ಸತ್ತ ರಕ್ತದ ಕಲೆಗಳು
ಹಳೆಯ ಬಟ್ಟೆಯ ಮೇಲೆ ಮಾಸಿ...
ಭಯದ ನೆರಳಲ್ಲಿ
ಕರುಳಿನ ಸುತ್ತ ಕೋಟೆಯಾಗಿದೆ..

ನಿರಾಸೆಯ ಕರಿ ಮೋಡವು
ಕತ್ತಲಲ್ಲಿ ಇಣುಕಿ ನೋಡಿ
ಅಶಕ್ತ ವ್ರಕ್ಶದ ಬುಡಕ್ಕೆ
ನೀರೆರೆಯದೆ ಕರಗಿಹೋಗಿದೆ...

ಬಾಲಂಗೊಚಿಯು ಆಗಸದಲ್ಲಿ
ಅಣುಕಿಸಿ ನಕ್ಕಿದೆ..
ಕೂದಲೆಳೆಯ ಅಂತರದಲ್ಲಿ
ನಲಿವು ಇಲ್ಲವಾಗಿದೆ...

1 comment:

  1. ಚೆನ್ನಾಗಿದ್ದು... ಇಸ್ಟ ಆತು..
    ಫೊಟೋ ಸಹ ಚೆನ್ನಾಗಿದ್ದು.. :)

    ReplyDelete