Sunday, February 27, 2011

ಹುಸಿ ಪ್ರೀತಿ


ಬಾ ಎಂದು ಕರೆಯಲಾರೆ
ನಿನ್ನ ನಿರೀಕ್ಷೆ ನಿಲ್ಲಿಸಲಾರೆ
ನಿನ್ನ ಕಂಗಳ ಕೊಳದಲ್ಲಿ ನನ್ನ ಪ್ರತಿಬಿಂಬವನ್ನು ಕಾಣಲು
ವ್ರಕ್ಷ ಸಿರಿಯ ಗೂಡಲ್ಲಿ ಅಡಗಿದ ಗುಬ್ಬಿಯಂತೆ ಕಾಯುತಿರುವೆ.

ಕನಸಿನ ಲೋಕದ ಸುಖದ ಸೆತುವೆಯ ಮೇಲೆ..
ನಿನ್ನ ಕಾಲಿನ ಮಣ್ಣಿನ ದೂಳಿನ ಕಾವು..
ನನ್ನ ಎದೆಯಾಲದಲ್ಲಿ ಬಿತ್ತಿದೆ ನೀನು
ಮಾಯದ ಒಲವಿನ ಗಾಯದ ನೋವು..

ಹೇಗೆ ಮರೆಯಲಿ ಹುಡುಗಿ ನಿನ್ನ ಹುಡುಗಾಟವ..
ಬತ್ತಿದ ಹ್ರದಯದಲ್ಲಿ ಉಸಿರಾದ ನಿನ್ನ ಹುಸಿ ಪ್ರೀತಿಯ..

ಶುಭೋದಯ


ಪರ್ವ ಸಾಲಿಗೆ ಉದಯ ರಶ್ಮಿಯ
ಚಿನ್ನದ ತಡಿಕೆ......
ಪುಷ್ಪಗಳ ಒಡಲಿಗೆ ಮಂಜಿನ
ಚಪ್ಪರದ ಹೊದಿಕೆ.......
ಚಿಗುರಿದ ಚಿಗುರಿಗೆ
ಇಬ್ಬನಿಯ ತೋರಿಕೆ....
ಇಳೆಯ ಮುಖದಲ್ಲಿ
ನಗುವ ನಲಿವಿನ ಸಾರಿಕೆ...
ಶುಭೋದಯ................

ದೂರದ ಭಾವ


ಇರುಳ ಕತ್ತಲಲ್ಲಿ ನೀ ಬಂದು ಸರಿದಂತೆ....
ಸಮುದ್ರ ದಂಡೆಯ ಕಂಡು ಕಾಣದ ಮರೀಚಿಕೆಯಂತೆ...
ತುಂಬಾ ಸತಾಯಿಸದೆ ನಿ ಬಂದು ನನ್ನ ಸೇರು....
ನಿಜವಾದ ನಲ್ಮೆಯ ಬಾಳ ಸ್ನೆಹಿತನಂತೆ.........

ಶ್ರಧ್ದಾಂಜಲಿ -ತಿಲಾಂಜಲಿ

ಜೀವ ಸವೆದು,
ಆತ್ಮ ತೊರೆದು ಹೋದ ದೇಹಕೆ../
 ಅರ್ಪಿಸುವುದು ಅನಿವಾರ್ಯವಿದೆಯೇ...
ಈ ಭಾವಪೂರ್ಣ ಶ್ರಧ್ದಾಂಜಲಿ../
ಅಳಿದು ಹೋದ ನೆರಳನ್ನು..
ನೆನಪಿಸುತ್ತಾ ತಾನು ಉತ್ತಮನಾಗುವ../
ಮನುಜ ಪ್ರಕೃತಿಗೆ
ಇಡಲೆ ಬೇಕು ತಿಲಾಂಜಲಿ.../