Tuesday, March 29, 2011

ಮೆಜೆಸ್ಟಿಕ್

ಬಸ್ಸಿಗಾಗಿ ಮೆಜೆಸ್ಟಿಕ್ನಲ್ಲಿ ಕಾಯುತಿದ್ದಾಗ, ನಾನಲ್ಲೆ ಕುಳಿತಿದ್ದರೂ, ಮಾಯದ ಮನಸ್ಸು ಹೊರಜಗತ್ತಿನ ಆಚೆಗೆ
ಒಡಾಡುತಿದ್ದಾಗ ಬರೆಯಲ್ಪಟ್ಟ ಕವಿತೆ... ಈ ತರದ ಅನುಭವ ನಿಮಗೂ ಆಗಿರಬಹುದು.
ಕವಿತೆಯನ್ನು ಅವಲೋಕಿಸಿ ತಾಳೆ ನೋಡಿ.
ಸದ್ದು ಗದ್ದಲದ ನಡುವೆ..
ಮನಸಿನ ಭಾವದ ಒಳಗೆ../

ಎತ್ತಲೊ ಸಾಗಿದೆ ಯೊಚನ ಲಹರಿಯ ಗಾಳಿ..
ಅವಿತು ಕುಳಿತ ನೆನಪನ್ನು ಕೆದಕಿ/

ಪ್ರಜ್ನಾವಸ್ತೆಯ ಹೊರಗೆ ಗಿರಕಿ ಹಾಕಿದೆ,,,
ಒಳ ಜಾರಿದ ಗಾಳವಿಲ್ಲದ ಜಗತ್ತು//

Sunday, March 27, 2011

ಒಲವಿನ ಕನಸು


ನದಿಯ ಅಲೆಯ
ಪ್ರಶಾಂತವಾದ ನಾದದಲ್ಲಿ,
ಮುಸ್ಸಂಜೆಯ ತಂಗಾಳಿಯ
ಊಸಿರಿನ ಆಹ್ಲಾದತೆಯಲ್ಲಿ...
ಮಧುರ ಯಾತನೆಯ
ಮೈ ಅರಳಿಸುವ ಒಲವಿನಲ್ಲಿ,
ದಡದ ಅಂಚಿಗೆ
ಕಂಡು ಕಾಣದಂತೆ..
ಕಾಯುತ ನಿಂತಿರುವ ನಿನ್ನ
ಜೀವವ ನೆನೆದು...
ನಿನ್ನ ಬಳಿ ಪಿಸುನುಡಿಯಲೆಂದು
ಓಡೊಡಿ ಬಂದ ನನಗೆ!!

ಕಾಲುಜಾರಿ ಮೈ ನರಳಿ
ಕಣ್ ಬಿಟ್ಟಾಗ..
ಎದ್ದೇಳು ಮಗು, ಕೆಲಸಕ್ಕೆ
ಹೋಗೊ ಸಮಯವಾಯಿತೆಂಬ..
ಅಮ್ಮನ ಕೂಗೇ ಹಿಂಸೆಯಾಯಿತು...

Friday, March 25, 2011

ಸ್ನೇಹ...
ಆಗಸದಲಿ ಗಾಳಿಯ
ಜೊತೆಯಾದ ಮುಗಿಲಿಗೆ
ತಾರೆಗಳ ಮಾಲಿಕೆ....

ನಮ್ಮಿಬ್ಬರ ಸ್ನೇಹವನ್ನು
ಮಾಡಲಾರೆ ಸೂರ್ಯ ಚಂದ್ರರಿಗೆ
ಹೋಲಿಕೆ......

ಜೊತೆಯಾಗಿ ಓಡಾಡುತ್ತಾ
ಆಕಾಶದಲ್ಲಿ ಮುಗಿಲಾಗುವುದೆ ಇಷ್ಟಾ...

ಎಂದೂ ಜೊತೆಯಾಗದ ಗೆಳೆತನದ ಕನ್ನಡಿ
ಸೂರ್ಯ ಚಂದ್ರಾಗುವುದು ಬಲು ಕಷ್ಟ..

Thursday, March 24, 2011

ಸಾವೆಂಬ ನೋವುಸಾವಿನ ಮನೆಯ ಮೂಲೆಯಲ್ಲಿ ಮುದುಡಿಕೂತು.....
ಅತ್ತಿತ್ತ ಬಿರುಸಾಗಿ ತಿರುಗಾಡುವ ಜನರನ್ನು ದಿಟ್ಟಿಸುತ್ತಾ...
ಅಲ್ಲಲ್ಲಿ ಗುಂಪು ಕಟ್ಟಿ ನಿಂತು ವಿಧಿಯನ್ನು ಶಪಿಸುತ್ತಾ..
ನಿಮಿಶಕ್ಕೊಂದರಂತೆ ಬಂದು ನಿಲ್ಲುವ ಗಾಡಿಯ ಶಬ್ದವನ್ನು ಆಲಿಸುತ್ತಾ...
ಮನದೊಳಗೆ ಕಡೆಯುವ ನೋವಿನ ಮೊಸರನ್ನು
ಅದರೊಟ್ಟಿಗೆ ಬಂದ ಕಣ್ಣೀರನ್ನು ತಡೆಯುತ್ತಾ..


ಒಬ್ಬರಾದ ಮೇಲೆ ಒಬ್ಬರಂತೆ ಸಮಾಧಾನ ಮಾಡುವ ಲೆಕ್ಕದಲ್ಲಿ
ಬಂದು ಹೋಗುವ ನೆಂಟರಿಷ್ಟರೂ.....
ಗೊತ್ತು ಗೊತ್ತಿಲ್ಲದೆಯೊ ಮನಸಿನ ನೋವನ್ನು ಮತ್ತೆ ಮತ್ತೆ ಕೆಣಕಿ
ಕಣ್ಣೀರಿನ ಮೊಡುವಲ್ಲಿ ತಾನಗಿಯೆ ಮತ್ತೆ ಮತ್ತೆ ಬೀಳಲು ಸಹಕರಿಸುವರು.
ಯಾರು ಎಷ್ಟೆ ಸಹಕರಿಸಿದರೂ ಸಮುದ್ರದಲ್ಲಿ ಮುಳುಗಿದ ಹಡಗಂತೆ..
ಕಳೆದು ಹೊದ ಜೀವವನ್ನು ಮತ್ತೆ ಮರಳಿ ತರಲಾಗದು...
ಒಮ್ಮೆ ಹಣೆಬರಹವನ್ನು ಬರೆದ ದೇವರೂ ಇನ್ನೊಮ್ಮೆ ತಿದ್ದಲು ಸಾದ್ಯವೇ?

Wednesday, March 23, 2011

ಕದಡಿದ ನೆನಪು


ಹಳೆಯ ಹಾದಿಯ
ಮಾತಿಲ್ಲದ ಪಯಣ...
ಕಾಲಡಿ ಸಿಕ್ಕು ನಲುಗಿದೆ
ಮಧುರ ಯಾತನೆಗಳು....

ಇದ್ದು ಇಲ್ಲದ ನೆನಪು
ಕಾವಲಿನ ಕವಲಿಗೆ ಮುಳುವಾಗಿದೆ..
ಮನದ ಮುತ್ತಿನ ತೋರಣವ
ಹರಿದು ಛಿದ್ರ ಛಿದ್ರ ಮಾಡಿವೆ...

ಸತ್ತ ರಕ್ತದ ಕಲೆಗಳು
ಹಳೆಯ ಬಟ್ಟೆಯ ಮೇಲೆ ಮಾಸಿ...
ಭಯದ ನೆರಳಲ್ಲಿ
ಕರುಳಿನ ಸುತ್ತ ಕೋಟೆಯಾಗಿದೆ..

ನಿರಾಸೆಯ ಕರಿ ಮೋಡವು
ಕತ್ತಲಲ್ಲಿ ಇಣುಕಿ ನೋಡಿ
ಅಶಕ್ತ ವ್ರಕ್ಶದ ಬುಡಕ್ಕೆ
ನೀರೆರೆಯದೆ ಕರಗಿಹೋಗಿದೆ...

ಬಾಲಂಗೊಚಿಯು ಆಗಸದಲ್ಲಿ
ಅಣುಕಿಸಿ ನಕ್ಕಿದೆ..
ಕೂದಲೆಳೆಯ ಅಂತರದಲ್ಲಿ
ನಲಿವು ಇಲ್ಲವಾಗಿದೆ...

Thursday, March 17, 2011

ಕವಿತೆನಿನ್ನೊಲವಿನ ಭಾವಕೆ
ನಾ ಮರುಳಾದೆ..

ಚಂದ್ರನಿಲ್ಲದ ಬಾನಂತೆ
ನಾ ಕರೆಗಿ ಹೋದೆ.

ಬೆಳಗಿನ ಇಬ್ಬನಿಯಂತೆ
ನೀ ಬಂದು ಸೋಕಿದಾಗ...

ಒಲೆಯೊಳಗಿನ ಕಾವಂತೆ
ನನ್ನಲ್ಲಿ ನಿ ಕವಿತೆಯಾದೆ.

Sunday, March 6, 2011

ಪ್ರಕ್ರತಿ


ಪೂರ್ವ ಪರ್ವತ ಶ್ರಂಗದಲ್ಲಿ
ಅರುಣನ ಬೆಳಕು ನಲಿದಾಡುತಿತ್ತು...\

ಜೀವ ಅಲೆಯ ಬಯಲಿನ ತಪ್ಪಲಲ್ಲಿ
ಮಂಜು ಕುಣಿದಡುತಿತ್ತು...\

ಮರೆ ಮಾಚದೆ ನಿನ್ನ ಸೌಂದರ್ಯವನ್ನು
ದಾರೆಯೆರೆಯೆ ಪ್ರಕ್ರತಿ...\

ನಿನಗಾಗಿ ಕಾದು ಬವಣಿಸಿ
ಈ ಇಳೆ ಪರಿತಪಿಸುತಿತ್ತು...\

ಬಣ್ಣದ ಲೋಕಬಣ್ಣದ ಲೋಕದಲ್ಲಿ ಮೀನಿನ ಹೆಜ್ಜೆ/
ಗಳಿಗೆಯ ಮಜಲಿನಲ್ಲಿ ಕ್ಶಣದ ಗೆಜ್ಜೆ\
ಊರುಕೇರಿ ಬೆಟ್ಟ ಹೊಳೆಯ ಹಾದು...
ಜ್ವಲಿಸಿದೆ ನಿನ್ನ ಇರುವಿಕೆಯ ಚಿಹ್ನೆಯ ಲಜ್ಜೆ..\