ಜೀನು ಜೀನು ಗೋ ಮಳೆಯಲಿ
ತೋಯ್ದು ತೋಪ್ಪೆಯಾಗದಂತೆ
ರಸ್ತೆಯಲ್ಲಿನ ಮಣ್ಣಿನ ನೀರಿನ ಮೇಲೆ
ಅಂಗಿಯ ಹಿಡಿದು ತುದಿ ಗಾಲಲ್ಲಿ
ನಿಧಾನವಾಗಿ ನಡೆದು ಹೋಗುವಾಗ ....
ಜೆರ್ ಎಂದು ಬಂದ ಕಾರು
ಕೊಚ್ಹೆ ನೀರನ್ನು ಎರಚಿ
ಮೈ ಎಲ್ಲ ಒದ್ದೆಯದಾಗ
ಮಳೆ ನೀರಿನಿಂದ ರಕ್ಷಣೆ ಪಡೆಯುವ
ಸಾಹಸವ ಬಿಟ್ಟ ನನಗೆ .........
ಬಾಲ್ಯದ ದಿನಗಳು ಮಿಂಚಿನಂತೆ
ಮನದಲ್ಲಿ ಗೆರೆ ಮೂಡಿ
ಮಾಯವಾಗೋ ಬದಲು
ಮನದಲ್ಲಿ ಮತ್ತೆ ಬಾಲ ಬುದ್ದಿಯನ್ನು ಬಿತ್ತಿ
ಮಳೆಯ ನೀರಲ್ಲಿ ಆಡೋ ಆಸೆಯನ್ನು ಮೂಡಿಸಿದವು
ಮತ್ತೆ ಬಾಲ್ಯದ ದಿನಗಳನ್ನು ಇಣುಕಿ ನೋಡಿದಾಗ ಆ ಮಧುರ ನೆನಪೇ ವಿಸ್ಮಯ......ಅಮರ್ ಹೆಗಡೆ
ReplyDeleteನಿಜವಾಗಲು ...... ಮತ್ತೆ ಸಿಗದ ಆ ದಿನಗಳು
ReplyDeleteಬಾಲ ಬುದ್ದಿ ಈಗಲೂ ಮಾಸಿಲ್ಲ...
ReplyDeleteಬೇಕೆಂದೇ ಅಡಗಿಸಿದ್ದೇವೆ ನಾವು...
ಅದೇ ಆ ಕಾರಿನ ಮುಚ್ಚಿದ ಗಾಜಿನ ಒಳಗೆ....
ಈ ಸಮಾಜಕ್ಕಂಜಿ....
Like It .
yes..u r rite
ReplyDelete