Saturday, April 30, 2011


ನೀ ನಡೆವ ಹಾದಿಯಲ್ಲಿ
ತುಸು ಮಲ್ಲಿಗೆಯ ಚೆಲ್ಲಿರುವೆ
ಬಾಯಾರಿಸಲೆಂದು ತಂದ ನೀರಿನಲ್ಲಿ
ಒಲವಿನ ಮಧುವನ್ನು ಬೆರೆಸಿರುವೆ/

ನಿನ್ನೊಡಲ ಪ್ರೀತಿಯ ಸವಿ ಜೇನಿಗೆ
ದುಂಬಿಯಂತೆ ಮುತ್ತಿರುವೆ
ಬೇಡುವೆನು ಇಂದು ಹೊರ ದೂಡದಿರು
ನಿನ್ನೊಳಗೆ ಕುಳಿತು ನಿನ್ನುಸಿರಾಗಲು ಬಯಸುವೆ

Friday, April 29, 2011

ಪ್ರೀತಿ vs ತ್ಯಾಗ


ಅವನಿಗಾಗಿ ಕಾಯುವುದರಲ್ಲಿ
ಅವನನ್ನು ಕಾಯಿಸುವುದರಲ್ಲಿ ಸುಖವಿದೆ
ಇಂದು ನಾಳೆ ಎನ್ನದೆ, ಬರುವನೆಂದು ಕಾಯುವೆ
ಆದರೆ ರಾಮನಿಗಾಗಿ ಕಾದ ಸೀತೆಯಂತೆ
ವರ್ಷನು ಗಟ್ಟಲೆ ಅವನಿಗಾಗಿ ಕಾಯಲಾರೆ...

ಸೀತೆಯಂತೆ ಅಷ್ಟೊಂದು ದಿನ
ಕಾದು ಪರಿತಪಿಸದೆ
ವತ್ತಾಯ ಪೂರ್ವಕವಾಗಿ
ಅವನ ಆಗಮನವ ನೀರಿಕ್ಷಿಸುವೆ

ತ್ಯಾಗವೇ ಪ್ರೀತಿಯಾದರೆ
ಪ್ರೀತಿಯಾಕೆ ಬೇಕು??
ಎಲ್ಲರು ತ್ಯಾಗಿಗಳಾದರೆ
ಪ್ರೀತಿಸುವರಾರು ????

ಪ್ರೀತಿಯನ್ನು ತ್ಯಾಗಮಾಡಿ
ದೊಡ್ದವರೆನಿಸಿ ಕೊಳ್ಳುವುದಕಿಂತ
ಪ್ರೀತಿಯಲಿ ಸ್ವಾರ್ತಿಯಾಗಿ
ಪ್ರೀತಿಯನು ಜಯಿಸಿ ಕೊಳ್ಳುವುದು ಉತ್ತಮ.....

ಶ್ವಾಸ-ಆಶ್ವಾಸ


ಮನಸಿನ ಹಾದಿಯ ಸುಗಮ ದಾರಿಯ
ಅಂಚಿನ ನಲಿವಿನ ರಾಶಿಯಂತೆ
ಕದಡಿದ ಮನಕೆ ತಂಪೆರೆದ
ವರುಣನ ಕ್ರಪೆಯಂತೆ/

ವಸಂತ ಮಾಸದ ಕೋಗಿಲೆ
ಗಾನದ ಇಂಪು
ನನಸಿನ ಬಯಲಲಿ
ಕನಸಿನದೆ ಕಂಪು /






ಕಾದು ಕಾದು ಬವಣಿಸಿ ಕೊನೆಗೂ ...........

ಬಿಸಿ ಉಸಿರು ಕರಗಿ
ನಿಟ್ಟುಸಿರಿನ ಶ್ವಾಸ
ಅಲ್ಪವಿರಾಮದ ಬಯಕೆಯ ತುದಿಯ
ನಲಿವಿನ ಆಶ್ವಾಸ/

Thursday, April 28, 2011

ಹವ್ಯಕ ಪದ್ಯ..



(lifu istene style, pancharangi..)
only for havyakas :)

ಹವ್ಯಕ ಮಾಣಿಯಾಗಿ ಹುಟ್ಟಿ,
ತೋಟ ಗಿಟ ಮಾಡಿಕೊಂಡು,
ಹಂಗೂ ಹಿಂಗೂ ಕಾಸು ಇದ್ರು...ಕೂಸು ಸಿಕ್ತಿಲ್ಲೆ/

ಬೈಕು ಸೆಲ್ಲು ಲ್ಯಾಪ್ ಟೊಪ್ ಇದ್ರು,
ಆರಾಮಾಗಿ ಸೆಟ್ಟಲ್ ಆದ್ರು
ಅಪ್ಪ ಅಮ್ಮನ ಸಂತಿಗಿದ್ರು,,ಕೂಸು ಸಿಕ್ತಿಲ್ಲೆ/

ಸಂಬಳ ಕೊಡುವ ಕೆಲಸ ಇದ್ದು,
ಒಳ್ಳೆ ಮಾಣಿ ಹೆಸರು ಇದ್ದು,
ಚಟ ಗಿಟ ಇಲ್ಲಿಗಿದೆ ಇದ್ರು ಕೂಸು ಸಿಕ್ತಿಲ್ಲೆ...

ನಮ್ಮ ಹವ್ಯಕ ಬಂಧುಗಳoo ಚುರು ಹಿಂಗೆಯ
ಎಲ್ಲ ಬದಿಗು ಹುಡುಕ್ರು aste ಕೂಸು ಸಿಕ್ತಿಲ್ಲೆ,,,,

ಕುಮಟ ಕಾರವಾರ ಹೊನ್ನಾವರಾ
ಸಿರಸಿ ಸಿದ್ದಾಪುರ ಯಲ್ಲಪುರಾ
ಎಲ್ಲ ಕಡೆ ಜಾತಕ ಕೊಟ್ರು ಕೂಸು ಸಿಕ್ತಿಲ್ಲೆ..

ಅಂತು ಇಂತು ಜಾತಕ ಆದ್ರು,
ಕೂಸಿಗೆ ಮಾನಿ ಮನಸೆ ಇಲ್ಲೆ,,
ಪೇಟೆಲಿಪ್ಪು ಮಾಣಿನೆ ಬೇಕು ಅಂತು ಕೂಸು ಸಿಕ್ತಿಲೆ

ಊರಲ್ಲಿ ಆಳು ಕಾಳು ಇರ್ತೊ
ಬೆಂಗಳೂರಗಿಂತ ನಂಗಳೂರಲ್ಲೆ
ಆರಾಮಾಗಿ ಇಪ್ಪುಲಾದ್ರೂ ಕೂಸು ಸಿಕ್ತಿಲ್ಲೆ..

ಎಲ್ಲ ಸೇರಿ ವಿಚಾರ ಮಾಡಿ ಹಿಂಗೆ ಅಗ್ತಾ ಹೊದ್ರೆ ಕಡೆಗೆ
ಊರೆಲ್ಲ ಖಾಲಿಯಾಗಿ ನಮ್ಮ ತನನೆ ಇರ್ತಿಲ್ಲೆ...

Wednesday, April 27, 2011

ನೋವು



ಜೀವನದ ಸುಗಮ ಹಾದಿಯಲ್ಲಿ ಮುಳ್ಳೆಕೆ?
ಮನಸಿನ ಗೂಡಲ್ಲಿ ನೋವೇಕೆ?

ಮುಳ್ಳಿನ ಕೃಪೆಯಿಂದ ಗೆಳೆತನದ ನೈಜತೆಯ ದರ್ಶನ
ಮನದ ನೋವಿನ ಬ್ರಾಂತಿ ಇಂದ ಪ್ರೇಮ - ಒಲವಿನ ಸಿಂಚನ

ಆತ್ಮೀಯತೆ ಸನಿಹವಾಗಲು ಮುಳ್ಳಿನ ನೋವು ಬೇಕೆಂಬುದು ಸೋಜಿಗ
ಇವೆರಡೂ ಬದುಕಿನ ಸಾಕ್ಷ್ಯ ಚಿತ್ರದ ಕಾವಲುಗಾರರು ಎನ್ನುವುದಂತೂ ನಿಜ